• ಮಹಿಳಾ ಸುರಕ್ಷತೆಗಾಗಿ “ಅಕ್ಕ ಪಡೆ” – ಮಹಿಳಾ ಪೊಲೀಸ್ ಪಡೆ ಶೀಘ್ರ ಜಾರಿ.
  • ಪ್ರಾರಂಭ ಹಂತ – ಬೀದರ್ನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಆಗಸ್ಟ್ 15ರಿಂದ ಬೆಳಗಾವಿ, ಮೈಸೂರು, ಮಂಗಳೂರುಗಳಲ್ಲಿ ಪ್ರಾಯೋಗಿಕ ಹಂತ.
  • ಬಾಲ್ಯವಿವಾಹ ಸಮಸ್ಯೆ – ಇನ್ನೂ ಕೆಲವೆಡೆ ನಡೆಯುತ್ತಿದ್ದು, ಇದರಿಂದ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಳ.
  • ಸರ್ಕಾರದ ಕ್ರಮ – ಕಾನೂನು ಜಾರಿಯಲ್ಲಿ, ಮಕ್ಕಳ ರಕ್ಷಣಾ ಸಮಿತಿಗಳು (CWC) ಎಲ್ಲಾ ಜಿಲ್ಲೆಗಳಲ್ಲೂ.
  • ಸಮಗ್ರ ಇಲಾಖೆ ಪಾಲ್ಗೊಳ್ಳಿಕೆ – ಶಿಕ್ಷಣ, ಆರೋಗ್ಯ, ಗೃಹ, ಸಮಾಜ ಕಲ್ಯಾಣ, ಕಂದಾಯ ಹಾಗೂ ಇತರೆ ಇಲಾಖೆಗಳು ಒಟ್ಟಿಗೆ ಕಾರ್ಯಾಚರಣೆ.
  • ಸಮಾಜ ಮಾಧ್ಯಮ ನಿಯಂತ್ರಣ – ದುರುಪಯೋಗಕ್ಕೆ ಕಡಿವಾಣ ಹಾಕುವ ಯೋಜನೆ.
  • ಮಕ್ಕಳ ಸಹಾಯವಾಣಿ 1098 – 24×7 ಕಾರ್ಯನಿರ್ವಹಣೆ, ತಕ್ಷಣ ರಕ್ಷಣಾ ಕ್ರಮ.

ಮಹಿಳೆಯರು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ “ಅಕ್ಕ ಪಡೆ” ಎಂಬ ಮಹಿಳಾ ಪೊಲೀಸ್ ಪಡೆ ಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ತೀರ್ಮಾನಿಸಿದೆ ಎಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಪಡೆ ಬೀದರ್ ಜಿಲ್ಲೆಯಲ್ಲಿ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಗಸ್ಟ್ 15 ರಿಂದ ಬೆಳಗಾವಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಪ್ರಯೋಗಾತ್ಮಕ ಹಂತದಲ್ಲಿ ಆರಂಭವಾಗಲಿದೆ.

ಅವರು ತಿಳಿಸಿದಂತೆ, ಕೆಲವೆಡೆ ಇನ್ನೂ ಪ್ರಚಲಿತದಲ್ಲಿರುವ ಸಾಮಾಜಿಕ ರೂಢಿಗಳಿಂದ ಬಾಲ್ಯವಿವಾಹಗಳು ನಡೆಯುತ್ತಿದ್ದು, ಇದರಿಂದ ಬಾಲ್ಯದಲ್ಲೇ ಗರ್ಭ ಧಾರಣೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯನ್ನು ಬೇರುಮಟ್ಟದಿಂದ ನಿರ್ಮೂಲಗೊಳಿಸಲು ಸರ್ಕಾರ ಸಂಕಲ್ಪಗೊಂಡಿದೆ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.

ಬಾಲ್ಯವಿವಾಹ ತಡೆಗಟ್ಟಲು ಸರ್ಕಾರ ಈಗಾಗಲೇ ಕಾನೂನು ಜಾರಿಗೊಳಿಸಿದ್ದು, ಮಕ್ಕಳ ರಕ್ಷಣಾ ಸಮಿತಿಗಳು (CWC) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 4 ಕೇಂದ್ರಗಳು ಬೆಂಗಳೂರಿನಲ್ಲಿ ಮತ್ತು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಒಂದು CWC ಇದೆ.

ಇದೆ ವೇಳೆ, ಸಾಮಾಜಿಕ ಮಾಧ್ಯಮಗಳ ದುರುಪಯೋಗಕ್ಕೂ ತಡೆಯೊಡ್ಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಗೃಹ, ಸಮಾಜ ಕಲ್ಯಾಣ, ಕಂದಾಯ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳು ಈ ಕಾರ್ಯದಲ್ಲಿ ಒಟ್ಟಾಗಿ ಪಾಲ್ಗೊಳ್ಳಲಿವೆ.

ಮಕ್ಕಳ ಸಹಾಯವಾಣಿ 1098 ಸಂಖ್ಯೆ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿದ್ದು, ಕರೆ ಬಂದ ತಕ್ಷಣ ಸಂಬಂಧಿತ ತಂಡಗಳು ಮಕ್ಕಳ ರಕ್ಷಣೆಗೆ ತೊಡಗುತ್ತವೆ. ಗ್ರಾಮ ಪಂಚಾಯಿತಿ ರಿಂದ ಜಿಲ್ಲಾ ಮಟ್ಟದವರೆಗೆ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಗಳನ್ನೂ ಸ್ಥಾಪಿಸಲಾಗಿದೆ.