ಹೊಸಪೇಟೆ, ಜುಲೈ 12: “ತುಂಬಿದ ಕೊಡ ತುಳುಕಿತಲೇ ಪರಾಕ್” ಇದು ಐತಿಹಾಸಿಕ ವಿಜಯನಗರ ಜಿಲ್ಲೆಯ ಹೂವಿನಗಡಗಲಿಯ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ದೈವವಾಣಿ ನುಡಿದಿದೆ.
ಇಂದು ಶನಿವಾರ ನಡೆದ ಕಾರ್ಣಿಕೋತ್ಸವದಲ್ಲಿ ದೈವವಾಣಿ ನುಡಿದಿದ್ದು, ಇದು ಮುಂದಿನ ರಾಜ್ಯ ರಾಜಕೀಯದ ಕುರಿತ ನಿಗೂಢ ಭವಿಷ್ಯ ವಾಣಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
“ತುಂಬಿದ ಕೊಡ ತುಳುಕಿತಲೈ ಪರಾಕ್” ಎಂದರೆ ರಾಜ್ಯದಲ್ಲಿನ ಸರ್ಕಾರ ತುಂಬಿದ ಕೊಡದ ರೀತಿಯಲ್ಲಿದೆ. ಆದ್ದರಿಂದ ಸರ್ಕಾರ ಬದಲಾವಣೆಯ ಯಾವುದೇ ಅವಕಾಶವಿಲ್ಲ. ಶಾಸಕರು ಒಗ್ಗಟ್ಟಾಗಿದ್ದರೆ ನಾಯಕತ್ವ ಬದಲಾವಣೆ ಇಲ್ಲ. ಆದರೆ ಶಾಸಕರು ನಿಲುವು ಬದಲಿಸಿದರೆ ನಾಯಕತ್ವ ಬದಲಾಗಬಹದು ಎಂದು ದೇವಸ್ಥಾನದ ಧರ್ಮದರ್ಶ ವೆಂಕಪ್ಪಯ್ಯ ವಿಶ್ಲೇಷಿಸಿದ್ದಾರೆ.
ಒಟ್ಟಾರೆ ಇದರರ್ಥ ಏನೆಂದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಆದರೆ ಕೈ ಶಾಸಕರ ನಿಲುವು ಬದಲಾದರೆ ಸಾಕು ನಾಯಕತ್ವ ಅಂದರೆ ಮುಖ್ಯಮಂತ್ರಿ ಸ್ಥಾನ ಅದಲು ಬದಲು ಆಗಬಹುದು ಎಂದು ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ ಭವಿಷ್ಯ ತಿಳಿಸಿದೆ.
ಅಂದರೆ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಆದರೆ ಕೈ ಶಾಸಕರ ನಿಲುವು ಬದಲಾದರೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಬೇರೊಬ್ಬ ನಾಯಕ ಸಿಎಂ ಆಗಬಹುದು ಎಂದು ನಿಗೂಢ ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ ಭವಿಷ್ಯ ಹೇಳಿದೆ.

